ವಿಷಯಕ್ಕೆ ತೆರಳಿ

ನಿಮ್ಮ ಸಂಸ್ಥೆ

People Intouch B.V. (‘ನಾವು’, ‘ನಾವು’, ‘ನಮ್ಮ’) ಅಭಿವೃದ್ಧಿಪಡಿಸಿದ SpeakUp® ಸಂವಹನ ಸಾಧನವನ್ನು ನಿಮ್ಮ ಸಂಸ್ಥೆಯು ನಿಮಗೆ ಲಭ್ಯವಾಗುವಂತೆ ಆರಿಸಿಕೊಂಡಿದೆ.

People Intouch B.V. ನೆದರ್ಲ್ಯಾಂಡ್‌ನಲ್ಲಿ, ಐರೋಪ್ಯ ಒಕ್ಕೂಟದಲ್ಲಿ (ಇಯು) ನೆಲೆಗೊಂಡಿದೆ, ಮತ್ತು ಆದ್ದರಿಂದ ನಾವು ಇಯು ಜಿಡಿಪಿಆರ್ (ಸಾರ್ವತ್ರಿಕ ದತ್ತಾಂಶ ರಕ್ಷಣಾ ನಿಯಮಗಳು) ಗೆ ಬದ್ಧರಾಗಿದ್ದೇವೆ, ಇದು ವಿಶ್ವದಲ್ಲೇ ಅತ್ಯಂತ ಸಮಗ್ರವಾದ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಬಂಧನೆಗಳಲ್ಲಿ ಒಂದಾಗಿದೆ.

ನಿಮ್ಮ ಸಂಸ್ಥೆಯ ಜೊತೆ ಸಂವಹನ ಮಾಡಲು ನೀವು SpeakUp® ಅನ್ನು ಬಳಸುವಾಗ ಈ ಖಾಸಗಿತನದ ಹೇಳಿಕೆ ಅನ್ವಯವಾಗುತ್ತದೆ.

SpeakUp® ಬಗ್ಗೆ

SpeakUp® ಮೂಲಕ, ನೀವು ಒಂದು ವರದಿಯನ್ನು ಸಲ್ಲಿಸಬಹುದು ಮತ್ತು SpeakUp® ಪರಿಸರದಲ್ಲಿ ನಿಮ್ಮ ಸಂಸ್ಥೆಯೊಂದಿಗೆ ಸುಭಧ್ರವಾದ ಮತ್ತು ಸುರಕ್ಷಿತವಾದ ಸಂಭಾಷಣೆಯನ್ನು ಪ್ರಾರಂಭಿಸಬಹುದು.

ನಿಮ್ಮ ಸಂಸ್ಥೆಯು SpeakUp® ಮೂಲಕ ನಿಮ್ಮ ವೈಯಕ್ತಿಕ ದತ್ತಾಂಶವನ್ನು ಸಂಸ್ಕರಿಸುವ ಜವಾಬ್ದಾರಿ ಹೊಂದಿರುತ್ತದೆ ಮತ್ತು ಅದು ದತ್ತಾಂಶ ನಿಯಂತ್ರಕನಾಗಿರುತ್ತದೆ. ನೀವು SpeakUp® ಗೆ ಸಂಬಂಧಿಸಿದಂತೆ ಮತ್ತು ನಿಮ್ಮ ವೈಯಕ್ತಿಕ ದತ್ತಾಂಶವನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಿಮ್ಮ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಅವರ SpeakUp ನೀತಿ ಮತ್ತು/ಅಥವಾ ಗೌಪ್ಯತಾ ನೀತಿಯನ್ನು ಪರಿಶೀಲಿಸಿ. People Intouch ದತ್ತಾಂಶ ಸಂಸ್ಕರಣಾ ಸಂಸ್ಥೆಯಾಗಿದ್ದು ನಾವು ಆ ಪಾತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಇದರರ್ಥ ನಿಮ್ಮ ಸಂಸ್ಥೆಯೊಂದಿಗೆ ಸಂವಹನ ನಡೆಸಲು ನಾವು ನಿಮಗೆ ಅತ್ಯುತ್ತಮವಾದ ಸುರಕ್ಷಿತವಾದ ಮಾರ್ಗವನ್ನು ಒದಗಿಸುತ್ತೇವೆ.

ನಿಮ್ಮ ಗೌಪ್ಯತೆ ನಮಗೆ ಮುಖ್ಯವಾಗಿದೆ. SpeakUp® ಬಳಸುವಾಗ ನಿಮಗೆ ಸುರಕ್ಷಿತವೆನಿಸಬೇಕೆಂದು ನಾವು ಬಯಸುತ್ತೇವೆ ಮತ್ತು ಈ ಕೆಳಗಿನವುಗಳ ಬಗ್ಗೆ ನಿಮಗೆ ತಿಳಿಸಬಯಸುತ್ತೇವೆ:

ಸೂಕ್ಷ್ಮ ದತ್ತಾಂಶ

SpeakUp® ಜನಾಂಗ, ಆರೋಗ್ಯ ದತ್ತಾಂಶ, ರಾಜಕೀಯ ದೃಷ್ಟಿಕೋನಗಳು, ತಾತ್ವಿಕ ನಂಬಿಕೆಗಳು (ಧಾರ್ಮಿಕ ಅಥವಾ ನಾಸ್ತಿಕ ಇತ್ಯಾದಿ), ಲೈಂಗಿಕ ದೃಷ್ಟಿಕೋನ ಅಥವಾ ಕಾನೂನು ಇತಿಹಾಸದಂತಹ ಸೂಕ್ಷ್ಮ ವೈಯಕ್ತಿಕ ದತ್ತಾಂಶವನ್ನು ಸಂವಹನ ಮಾಡುವ ಉದ್ದೇಶ ಹೊಂದಿಲ್ಲ. SpeakUp® ಅನ್ನು ಬಳಸುವಾಗ ದಯವಿಟ್ಟು ಇದನ್ನು ಗಣನೆಗೆ ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಕೇಳುತ್ತೇವೆ.

ಅಪ್ರಾಪ್ತ ವಯಸ್ಕರು

ನೀವು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ, ಕಾನೂನುಬದ್ಧವಾಗಿ ಅಗತ್ಯವಿದ್ದರೆ, ನೀವು SpeakUp® ಅನ್ನು ಬಳಸಲು ನಿಮ್ಮ ಸಂಸ್ಥೆಗೆ ನಿಮ್ಮ ಪೋಷಕರು ಅಥವಾ ಪಾಲಕರ ಸಮ್ಮತಿಯ ಅಗತ್ಯವಿರುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ

SpeakUp® ಮೂಲಕ ಸಲ್ಲಿಸಿರುವ ವರದಿಗೆ ಏನಾಗುತ್ತದೆ?

ವರದಿಯ ವಿಷಯವಸ್ತುವನ್ನು ನಿಮ್ಮ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ನಿಮ್ಮ ಸಂಸ್ಥೆ SpeakUp® ಅನ್ನು ಯಾವುದಕ್ಕೆ ಬಳಸಲು ಉದ್ದೇಶಿಸಲಾಗಿದೆಯೋ ಆ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ. ವರದಿಗಳನ್ನು ಯಾವಾಗಲೂ ನಿಮ್ಮ ಸಂಸ್ಥೆಯೊಂದಿಗೆ ಲಿಖಿತ ರೂಪದಲ್ಲಿ ಹಂಚಿಕೊಳ್ಳಲಾಗುತ್ತದೆ. ಆಡಿಯೋ ವರದಿಗಳನ್ನು ಹಂಚಿಕೊಳ್ಳುವ ಮೊದಲು ಅವುಗಳನ್ನು ಭಾಷಾಂತರಿಸಲಾಗುತ್ತದೆ, ಮತ್ತು ಆಡಿಯೋ ಫೈಲ್ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತದೆ. ನೀವು SpeakUp®ಗಾಗಿ ಇಮೇಲ್ ನೋಟಿಫಿಕೇಷನ್‌ಗಳನ್ನು ಅಥವಾ ಪುಷ್ ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಬಹುದು. ನೀವು ಯಾವುದೇ ಸಮಯದಲ್ಲೂ ನಿಮ್ಮ ಸಾಧನದ ಸೆಟ್ಟಿಂಗ್ಗಳ ಮೂಲಕ SpeakUp® ಮೊಬೈಲ್ ಆ್ಯಪ್ಗಾಗಿ ಪುಶ್ ನೋಟಿಫಿಕೇಶನ್ಗಳನ್ನು ನಿಷ್ಕ್ರಿಯಗೊಳಿಸಬಹುದು. SpeakUp® ಮೂಲಕ ಸಲ್ಲಿಸಿರುವ ವರದಿಗೆ ಏನಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಸಂಸ್ಥೆಯ SpeakUp ನೀತಿ ಮತ್ತು/ಅಥವಾ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಅನಾಮಧೇಯತೆ

SpeakUp® ಮೂಲಕ ವರದಿಯನ್ನು ಸಲ್ಲಿಸುವಾಗ, ನೀವು ನಿಮ್ಮ ಸಂಸ್ಥೆಯೊಂದಿಗೆ ನಿಮ್ಮ ಗುರುತನ್ನು ಹಂಚಿಕೊಳ್ಳಲು ಅಥವಾ ಅನಾಮಧೇಯರಾಗಿ ಉಳಿಯಲು ನಿರ್ಧರಿಸಬಹುದು. ನಿಮ್ಮ ವರದಿಯಲ್ಲಿ ನೀವು ವೈಯಕ್ತಿಕ ವಿವರಗಳನ್ನು ಹಂಚಿಕೊಂಡರೆ, ನಿಮ್ಮ ವರದಿಯನ್ನು ನಿರ್ವಹಿಸುವಾಗ ಇವುಗಳನ್ನು ನಿಮ್ಮ ಸಂಸ್ಥೆಯು ಪ್ರಕ್ರಿಯೆಗೊಳಿಸುತ್ತದೆ.

SpeakUp® ಅನ್ನು ಬಳಸುವಾಗ ವೈಯಕ್ತಿಕ ದತ್ತಾಂಶವನ್ನು ಏಕೆ ಪ್ರಕ್ರಿಯೆಗೊಳಿಸಲಾಗುತ್ತದೆ?

SpeakUp® ಮೂಲಕ ವೈಯಕ್ತಿಕ ದತ್ತಾಂಶದ ಸಂಸ್ಕರಣೆ ಅವಶ್ಯಕವಾಗಿದೆ:

ಯಾವ ದತ್ತಾಂಶವನ್ನು ಸಂಸ್ಕರಿಸಲಾಗುತ್ತದೆ?

SpeakUp® ಅನ್ನು ಬಳಸುವಾಗ ನೀವು ಒದಗಿಸಿದ ಕೆಲವು ದತ್ತಾಂಶವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ನಿಮ್ಮ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಈ ದತ್ತಾಂಶವನ್ನು SpeakUp®ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಮಗೆ ಒದಗಿಸಲು, ದೃಢೀಕರಣದ ಉದ್ದೇಶಗಳಿಗಾಗಿ, ಅಧಿಸೂಚನೆಯ ಉದ್ದೇಶಗಳಿಗಾಗಿ (ಸಕ್ರಿಯಗೊಳಿಸಿದ್ದರೆ; ಉದಾ. ನಿಮ್ಮ ಇಮೇಲ್ ವಿಳಾಸ), ನಿಮ್ಮ ಸಾಧನದೊಂದಿಗೆ ಸುರಕ್ಷಿತ ಸಂಪರ್ಕವನ್ನು ಸ್ಥಾಪಿಸಲು ಮತ್ತು ಭದ್ರತಾ ಬೆದರಿಕೆಗಳು ಅಥವಾ ಇತರ ದುರುದ್ದೇಶಪೂರಿತ ಚಟುವಟಿಕೆಯನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಪ್ರಕ್ರಿಯೆಗೊಳಿಸಲಾಗುತ್ತದೆ. ಈ ಮಾಹಿತಿಯನ್ನು ಯಾವತ್ತೂ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಮತ್ತು ಸಾಬೀತಾದ ದುರುದ್ದೇಶಪೂರಿತ ಚಟುವಟಿಕೆಯ ಕೃತ್ಯದಿಂದಾಗಿ ಈ ಅವಧಿಯನ್ನು ವಿಸ್ತರಿಸುವ ಅಗತ್ಯವಿರದ ಹೊರತು, ಅಗತ್ಯವಾದ ಉದ್ದೇಶಕ್ಕೆ ಅಗತ್ಯವಿರುವಷ್ಟು ಕಾಲ ಮಾತ್ರ ಇದನ್ನು ಉಳಿಸಿಕೊಳ್ಳಲಾಗುತ್ತದೆ.

ದತ್ತಾಂಶ ಸುರಕ್ಷತೆ

ನಿಮ್ಮ ವೈಯಕ್ತಿಕ ದತ್ತಾಂಶದ ನಷ್ಟ, ದುರುಪಯೋಗ ಅಥವಾ ಬದಲಾವಣೆಯನ್ನು ತಡೆಗಟ್ಟಲು People Intouch ವ್ಯಾಪಕವಾದ ಕ್ರಮಗಳನ್ನು ಕೈಗೊಂಡಿದೆ. SpeakUp® ವೆಬ್ ಮತ್ತು SpeakUp® ಮೊಬೈಲ್ ಆಪ್ ಮೂಲಕ ಕಳಿಸಿದಾಗ ಎಲ್ಲಾ ದತ್ತಾಂಶವನ್ನು ಗೂಢಲಿಪೀಕರಣಗೊಳಿಸಲಾಗುತ್ತದೆ. 

ಕುಕೀಗಳು

SpeakUp® ವೆಬ್‌ಗೆ ಭೇಟಿ ನೀಡಿದಾಗ, ಸುರಕ್ಷಿತ ಸಂವಹನವನ್ನು ಒದಗಿಸಲು ಸೆಷನ್ ಕುಕೀಗಳನ್ನು ಬಳಸಲಾಗುತ್ತದೆ. ಈ ಸೆಷನ್ ಕುಕೀ ದತ್ತಾಂಶವನ್ನು ಎರಡು (2) ಗಂಟೆಗಳ ನಂತರ ಅಳಿಸಲಾಗುತ್ತದೆ. ಕುಕೀಗಳನ್ನು ಅಳಿಸಲು, ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ನೀವು ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳನ್ನು ಬಳಸಬಹುದು.

ಮಾರ್ಪಾಟುಗಳು

People Intouch ಸಾಧ್ಯವಾದಷ್ಟೂ ಉತ್ತಮ ರೀತಿಯಲ್ಲಿ ನಿಮಗೆ ಮಾಹಿತಿ ನೀಡಬಯಸುತ್ತದೆ, ಮತ್ತು ಕಾಲಕಾಲಕ್ಕೆ ಈ ಗೌಪ್ಯತಾ ಹೇಳಿಕೆಯನ್ನು ತಿದ್ದುಪಡಿ ಮಾಡಬಹುದು ಮತ್ತು ಬದಲಾಯಿಸಬಹುದು.

ನಿಮ್ಮ ಹಕ್ಕುಗಳು ಯಾವುವು?

ನಿಮ್ಮ ಸಂಸ್ಥೆ ನಿಮ್ಮ ವೈಯಕ್ತಿಕ ದತ್ತಾಂಶದ ಸಂಸ್ಕರಣೆಗೆ ಮತ್ತು ಅನ್ವಯವಾಗುವ ದತ್ತಾಂಶ ಸಂರಕ್ಷಣಾ ಕಾನೂನುಗಳಿಂದ ಉದ್ಭವಗೊಳ್ಳುವ ನಿಮ್ಮ ಹಕ್ಕುಗಳನ್ನು ಸುಭಧ್ರಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ನಿಮ್ಮ ಸಂಸ್ಥೆಯಿಂದ ನಿಮ್ಮ ವೈಯಕ್ತಿಕ ದತ್ತಾಂಶದ ಸಂಸ್ಕರಣೆ ಮತ್ತು ನಿಮ್ಮ ದತ್ತಾಂಶ ಸಂರಕ್ಷಣಾ ಹಕ್ಕುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು SpeakUp ನೀತಿ ಮತ್ತು/ಅಥವಾ ನಿಮ್ಮ ಸಂಸ್ಥೆಯ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಕೊನೆಯ ಬಾರಿ ಪರಿಷ್ಕರಿಸಿರುವುದು 12 ಜುಲೈ 2022

***